 
ಜೀವ ಜಡರೂಪ ಪ್ರಪಂಚವನದಾವುದೋ| 
ಆವರಿಸಿಕೊಂಡುಮೊಳನೆರೆದುಮಿಹುದಂತೆ|| 
ಭಾವಕೊಳಪಡದಂತೆ ಅಳತೆಗಳವಡದಂತೆ| 
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ||			೨|| 
 
(ಪ್ರಪಂಚವನು+ಅದು+ಆವುದೊ) (ಆವರಿಸಿಕೊಂಡುಂ+ಒಳನೆರೆದುಂ+ಇಹುದಂತೆ) (ಭಾವಕೆ+ಒಳಪಡದಂತೆ) 
(ಅಳತೆಗೆ+ಆಳವಡದಂತೆ) 
 
ಈ ಜೀವ ತುಂಬಿದ ಚೇತನವಿಲ್ಲದ(ಜಡ) ಪ್ರಪಂಚವನ್ನು, ಯಾವುದೊ ಒಂದು ಶಕ್ತಿ ಆವರಿಸಿಕೊಂಡು, ಒಳಗೆ ತುಂಬಿಕೊಂಡು(ಒಳನೆರೆ) ಇರುವಂತೆ, ಭಾವಕ್ಕೆ ಒಳಪಡದಂತೆ,  
ಅಳತೆಗೆ ವಶವಾಗದಂತೆ(ಅಳವಡದಂತೆ) ಇರುವುದೊ, ಆ ವಿಶೇಷಕ್ಕೆ ನಮಸ್ಕರಿಸು(ಮಣಿ)
೧. ಶ್ರೀ ವಿಷ್ಣು ವಿಶ್ವಾದಿಮೂಲ